Sri Madhvacharya
।। ಶ್ರೀ ಗುರುಭ್ಯೋ ನಮಃ ।।
ಪ್ರಥಮೋ ಹನುಮನ್ನಾಮ | ದ್ವಿತೀಯೋ ಭೀಮ ಏವಚ |
ಪೂರ್ಣಪ್ರಜ್ಞ ತೃತೀಯಸ್ತು ಭಗವತ್ಕಾರ್ಯ ಸಾಧಕಃ ||
Shivalli Sabha Logo
← Home All Events
📍 Mangaladevi Zone

ಶ್ರೀ ಚಕ್ರಪಾಣಿ ಗೋಪಿನಾಥ ದೇವಸ್ಥಾನ - ವಿಷ್ಣು ಸಹಸ್ರನಾಮ

📅 Sunday, 06 Sep 2026 at 01:00 PM
📍 ಅತ್ತಾವರ ಶ್ರೀ ಚಕ್ರಪಾಣಿ ಗೋಪಿನಾಥ ದೇವಸ್ಥಾನ, ಅತ್ತಾವರ — View on map
ಅತ್ತಾವರ ಶ್ರೀ ಚಕ್ರಪಾಣಿ ಗೋಪಿನಾಥ ದೇವಸ್ಥಾನ ಶ್ರೀ ಚಕ್ರಪಾಣಿ ಗೋಪಿನಾಥ ದೇವಸ್ಥಾನದಲ್ಲಿ 40 ದಿನಗಳ ವಿಷ್ಣು ಸಹಸ್ರನಾಮ ಪಾರಾಯಣ ಸಂಪನ್ನ
ಅತ್ತಾವರ ಶ್ರೀ ಚಕ್ರಪಾಣಿ ಗೋಪಿನಾಥ ದೇವಸ್ಥಾನದ ಮುಖ್ಯ ಅರ್ಚಕರಾದ ಶ್ರೀ ಗೋಪಾಲಕೃಷ್ಣ ಭಟ್ ಅವರ ಸಂಕಲ್ಪದಂತೆ, ಶಿವಳ್ಳಿ ಸಭಾ ಮಂಗಳಾದೇವಿ ವಲಯದ ನೇತೃತ್ವದಲ್ಲಿ ಹಾಗೂ ವಿವಿಧ ವಲಯಗಳ ಸದಸ್ಯರ ಸಹಕಾರದೊಂದಿಗೆ ಶ್ರೀ ಕ್ಷೇತ್ರದಲ್ಲಿ ಜುಲೈ 29ರಂದು ಗುರುಪೂರ್ಣಿಮೆಯಂದು ಆರಂಭಗೊಂಡಿದ್ದ 40 ದಿನಗಳ 1008 ಆವೃತ್ತಿಗಳ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣವು ಸೆಪ್ಟೆಂಬರ್ 6ರಂದು ನಡೆದ ವಿಷ್ಣು ಸಹಸ್ರನಾಮ ಯಾಗದೊಂದಿಗೆ ಸಂಪನ್ನಗೊಂಡಿತು.
ಬೆಳಿಗ್ಗೆ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣದೊಂದಿಗೆ ದೇವತಾ ಕಾರ್ಯಕ್ಕೆ ಚಾಲನೆ ದೊರೆಯಿತು. ಈ ಸಂದರ್ಭದಲ್ಲಿ ಭಕ್ತರಿಂದ ಲಕ್ಷ್ಮೀಶೋಭಾನೆ, ಭಜನಾಸೇವೆ ಹಾಗೂ ಶ್ರೀ ವಿಷ್ಣು ಸಹಸ್ರನಾಮಾವಳಿಗಳನ್ನು ಶ್ರೀ ದೇವರಿಗೆ ಸಮರ್ಪಿಸಲಾಯಿತು. ಬಳಿಕ ಮಹಾಪೂಜೆ ನೆರವೇರಿದ್ದು, ಭಕ್ತರು ಪ್ರಸಾದ ಸ್ವೀಕರಿಸಿ ಧನ್ಯರಾದರು.
ದೇವಸ್ಥಾನದ ಮುಖ್ಯ ಅರ್ಚಕರಾದ ಶ್ರೀ ಗೋಪಾಲಕೃಷ್ಣ ಭಟ್ ಅವರ ಮಾರ್ಗದರ್ಶನದಲ್ಲಿ ವೇ.ಮೂ. ವೆಂಕಟರಮಣ ಭಟ್ ಹಾಗೂ ವೇ.ಮೂ. ಪ್ರಶಾಂತ್ ಆಚಾರ್ ಅವರು ವಿಷ್ಣು ಸಹಸ್ರನಾಮ ಯಾಗದ ವಿಧಿವಿಧಾನಗಳನ್ನು ನೆರವೇರಿಸಿದರು. ಯಾಗದ ಕಾರ್ಯವನ್ನು ನೆರವೇರಿಸಿದ ಇಬ್ಬರು ವೇದಮೂರ್ತಿಗಳನ್ನು ಶಾಲು ಹೊದಿಸಿ ಗೌರವಿಸಲಾಯಿತು.
40 ದಿನಗಳ ಕಾಲ ನಿರಂತರವಾಗಿ ಪಾರಾಯಣ ನಡೆಸಿದ ಶ್ರೀಮತಿ ರೇಖಾ ರಮೇಶ್ ಭಟ್ ಹಾಗೂ ಪಾರಾಯಣಕ್ಕೆ ಮಾರ್ಗದರ್ಶನ ನೀಡಿದ ಎಕ್ಕೂರು ವಲಯದ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಭಟ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಶಿವಳ್ಳಿ ಸಭಾ ತಾಲೂಕು ಕಾರ್ಯದರ್ಶಿ ಶ್ರೀ ಭಾಸ್ಕರ್ ಭಟ್, ಮಂಗಳಾದೇವಿ ಅವರು 40 ದಿನಗಳ ಪರ್ಯಂತ ನಡೆದ ಈ ಧಾರ್ಮಿಕ ಕಾರ್ಯಕ್ಕೆ ಸಹಕರಿಸಿ, ಪಾರಾಯಣದಲ್ಲಿ ಕೈಜೋಡಿಸಿದ ಎಲ್ಲರನ್ನೂ ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಶಿವಳ್ಳಿ ಸಭಾದ ತಾಲೂಕು ಮಹಿಳಾ ಸದಸ್ಯೆ ಶ್ರೀಮತಿ ಪೂರ್ಣಿಮಾ ಶಾಸ್ತ್ರಿ, ಮಂಗಳಾದೇವಿ ವಲಯದ ಅಧ್ಯಕ್ಷ ಶ್ರೀ ಕೃಷ್ಣಮೂರ್ತಿ ಐತಾಳ್, ಕಾರ್ಯದರ್ಶಿ ಶ್ರೀ ಗಣೇಶ ಉಡುಪ, ಖಜಾಂಜಿ ಶ್ರೀ ಅನಂತರಾಮರಾವ್ ಸೇರಿದಂತೆ ಮಂಗಳಾದೇವಿ ಹಾಗೂ ಇತರ ವಲಯಗಳ ಪದಾಧಿಕಾರಿಗಳು, ಸದಸ್ಯರು ಮತ್ತು ಭಕ್ತರು ಉಪಸ್ಥಿತರಿದ್ದರು.

🙏 This event has concluded. Thank you to everyone who joined us!
ಈ ಕಾರ್ಯಕ್ರಮ ಮುಗಿದಿದೆ. ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು.

See Upcoming Events
← See all upcoming events