ಶಿಕ್ಷಕರ ದಿನಾಚರಣೆ : ಕುಡುಪು ವಲಯದಿಂದ ನಿವೃತ್ತ ಶಿಕ್ಷಕಿಯರಿಗೆ ಗೌರವ ಸನ್ಮಾನ
📝 ಪೂರ್ಣ ವರದಿ — Full Report
ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿವಳ್ಳಿ ಸಭಾ (ರಿ.), ಮಂಗಳೂರು ಇದರ ಕುಡುಪು ವಲಯದ ವತಿಯಿಂದ ವಲಯದ ಹಿರಿಯ ನಿವೃತ್ತ ಶಿಕ್ಷಕಿಯರಾದ ಶ್ರೀಮತಿ ಕಿಶೋರಿ ನಾರಾಯಣ ಭಟ್, ಕುಲಶೇಖರ ಹಾಗೂ ಶ್ರೀಮತಿ ಶಶಿಕಲಾ ಮನೋಹರ ಭಟ್, ಕುಡುಪು ಅವರನ್ನು ಅವರ ಸ್ವಗೃಹದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಅನೇಕ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರ ಶೈಕ್ಷಣಿಕ ಬೆಳವಣಿಗೆ ಹಾಗೂ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಇಬ್ಬರೂ ಶಿಕ್ಷಕಿಯರು ಸಲ್ಲಿಸಿದ ಮಹತ್ವದ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು. ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಸುದೀರ್ಘ ಸೇವೆ ಹಾಗೂ ಸಮಾಜ ನಿರ್ಮಾಣದಲ್ಲಿ ವಹಿಸಿದ ಪಾತ್ರವನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಿವಳ್ಳಿ ಸಭಾ (ರಿ.) ಮಂಗಳೂರು ತಾಲೂಕು ಜೊತೆ ಕಾರ್ಯದರ್ಶಿ ಶ್ರೀ ರವೀಶ್ ನಾರ್ಶ, ಕುಡುಪು ವಲಯದ ಅಧ್ಯಕ್ಷ ಶ್ರೀ ಶ್ರೀಪತಿ ಭಟ್ ಬೆರ್ಕೆ, ಕಾರ್ಯದರ್ಶಿ ಶ್ರೀಮತಿ ಸುಜಾತ ಗುಣಸಾಗರ, ಖಜಾಂಚಿ ಶ್ರೀಮತಿ ಸ್ವರ್ಣಲತಾ, ವಿಪ್ರ ಸಮಾಗಮ ವೇದಿಕೆಯ ನಿಕಟಪೂರ್ವ ಅಧ್ಯಕ್ಷರು ಹಾಗೂ ವಲಯದ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀ ಶೇಷಾದ್ರಿ ಭಟ್, ಶ್ರೀ ಕೆ. ಎಲ್. ಉಪಾಧ್ಯಾಯ, ಶ್ರೀ ಗುಣಸಾಗರ, ಶ್ರೀ ಪದ್ಮನಾಭ ಪೆರ್ಮುದೆನ್ನಾಯ, ಶ್ರೀ ನಾರಾಯಣ ಭಟ್ ಕಕ್ಕೆಬೆಟ್ಟು, ಶ್ರೀ ರಾಕೇಶ್, ಶ್ರೀಮತಿ ವತ್ಸಲಾ ಉಪಾಧ್ಯಾಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಹಿರಿಯ ಶಿಕ್ಷಕಿಯರನ್ನು ಗೌರವಿಸುವ ಮೂಲಕ ಅವರ ಅಮೂಲ್ಯ ಶೈಕ್ಷಣಿಕ ಸೇವೆಯನ್ನು ಸ್ಮರಿಸಲಾಯಿತು.